ಸೋಲಿನ ಬಗ್ಗೆ ಅತಿಯಾಗಿ ಪ್ರತಿಕ್ರಿಯಿಸಲಾರೆ : ರೋಹಿತ್ ಶರ್ಮಾ
ರೋಹಿತ್ ಶರ್ಮಾ | PC : PTI
ಹೊಸದಿಲ್ಲಿ : ಭಾರತ ತಂಡವು 2012ರ ನಂತರ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಸೋತಿರಬಹುದು. ಆದರೆ ಇದರಿಂದ ಆತಂಕಪಡುವ ಅಗತ್ಯವಿಲ್ಲ. ತಂಡವು ಕಳೆದ 12 ವರ್ಷಗಳಿಂದ ಸತತ 18 ಸರಣಿಗಳನ್ನು ಜಯಿಸಿತು. ಈಗ ನಾವು ಸುಧಾರಿಸಿಕೊಳ್ಳಬೇಕಾದ ಕಡೆಗೆ ಗಮನ ಹರಿಸುತ್ತೇವೆ ಎಂದು ನಾಯಕ ರೋಹಿತ್ ಶರ್ಮಾ ಸ್ಪಷ್ಟಪಡಿಸಿದರು.
ಈ ಸೋಲಿನ ನಂತರ ಅತಿಯಾಗಿ ಪ್ರತಿಕ್ರಿಯಿಸಲಾರೆ. ನಾವು ನಿರ್ದಿಷ್ಟ ಆಟಗಾರರೊಂದಿಗೆ ಮಾತನಾಡಬೇಕಾಗಿದೆ. ಒಂದಡೆ ಕುಳಿತು ಪ್ರತಿ ಇನಿಂಗ್ಸ್ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ಪಂದ್ಯ ನಂತರದ ಸುದ್ದಿಗೋಷ್ಠಿಯಲ್ಲಿ ರೋಹಿತ್ ಹೇಳಿದರು.
ನಾವು ಕಳೆದ 12 ವರ್ಷಗಳಿಂದ ಗೆಲುವಿನ ಓಟದಲ್ಲಿದ್ದೆವು. ಈ ಅವಧಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ನಾವು ವಿಭಿನ್ನವಾಗಿ ಮಾತನಾಡುವ, ಭಿನ್ನವಾಗಿ ಏನಾದರೂ ಮಾಡುವ ಅಗತ್ಯವಿಲ್ಲ. ನಾವೇನು ಉತ್ತಮವಾದುದ್ದನ್ನು ಮಾಡಿಲ್ಲ, ಸುಧಾರಿಸಿಕೊಳ್ಳಲು ಏನು ಮಾಡಬೇಕೆಂಬ ಕುರಿತಾಗಿ ಯೋಚಿಸುತ್ತೇವೆ. ಇದೇ ತಂಡವು ಈ ಹಿಂದೆ ಸಾಕಷ್ಟು ಉತ್ತಮ ಕ್ರಿಕೆಟ್ ಆಡಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.