ಮಗಳ ಕತೆಗೆ ಫಿದಾ ಆದ ಪ್ರೇಕ್ಷಕರು !

Hero Image

” ಮಗಳೇ ” ಬೆಳ್ಳಿತೆರೆ ಮೇಲೆ ಉತ್ತಮ ಪ್ರದರ್ಶನ ಕಾಣಿತ್ತಿರುವ ಅರ್ಥಪೂರ್ಣ ಚಿತ್ರ . ಈ ಮಗಳೇ ಸಿನಿಮಾ ಏಪ್ರಿಲ್ 21 ಕ್ಕೆ ಕರ್ನಾಟಕದಾದ್ಯಂತ ರಿಲೀಸ್ ಆಗಿದ್ದು , ಸೈಲೆಂಟ್ ಆಗಿ ಥೇಟರ್ ನಲ್ಲಿ ಸದ್ದು ಮಾಡಿತ್ತಿರುವ ಚಿತ್ರ . ಅಪ್ಪ ಮಗಳ ಬಾಂಧವ್ಯ ಅನ್ನೊದು ಸರಿ ಸಾಟಿ ಇಲ್ಲದ ಸಂಬಂಧ . ಈಗ ಈ ಚಿತ್ರ ಸಿನಿ ಪ್ರಿಯರ ಮನ ಗೆದ್ದಿದೆ .

ಮಗಳೇ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ತಂದೆ ಮಗಳ ಭಾಂದವ್ಯವನ್ನು ಸಾರುವ ಕಥಾಹಂದರ ಹೊಂದಿರಿವ ಚಿತ್ರ . ಮಗಳೇ (ಆದ್ಯ) ಪಾತ್ರದಲ್ಲಿ ಸುಪ್ರೀತಾ ರಾಜ್ ನಟಿಸಿದ್ದಾರೆ . ಈ ಚಿತ್ರದ ನಿರ್ದೇಶಕರು ಸೋಮು ಕೆಂಗೇರಿ ಹಾಗೂ ಜೇಡ್ ನೆಟ್ ಕಮ್ಯೂನಿಕೇಷನ್ ಪ್ರೈ ಲಿಮಿಟೆಡ್ ಚಿತ್ರ ನಿರ್ಮಾಣ ಜವಾಬ್ದಾರಿ ಹೊತ್ತುಕೊಂಡಿದೆ .

ಇನ್ನೂ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ . ಇದು ಕೇವಲ ಅಪ್ಪ ಮಗಳ ಬಾಂಧವ್ಯ ತೋರಿಸುವ ಕತೆ ಅಲ್ಲ . ಅದನ್ನ ಮೀರಿ ಕೌಟುಂಬಿಕವಾಗಿ ಎಳೆಯನ್ನ ಅದ್ಬುತವಾಗಿ ತೋರಿಸಿರುವ ಸಿನಿಮಾ . ಈ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ . ” ಮಕ್ಕಳ ಮುಂದೆ ಹೇಗೆ ಮಾತನಾಡಬೇಕು ಅನ್ನೊದನ್ನ ಯೋಚನೆ ಮಾಡಿ ಮಾತಾಡಬೇಕು ” ಅಂತಾ .
ಆ ಡೈಲಾಗ್ ತುಂಬಾನೆ ಅರ್ಥಪೂರ್ಣ ಎಂದು ಹೇಳ್ತಿದ್ದಾರೆ ಪ್ರೇಕ್ಷಕರು .

ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು , ಇದು ನಿರ್ದೇಶಕ ಸೋಮು ಕೆಂಗೇರಿ ಅವರ ಮೊದಲ ಸಿನಿಮಾವಾದರೂ ಕಥೆಯನ್ನ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ . ಒಂದು ಸಂಸಾರದ ಸಾರ ಇದಾಗಿದ್ದು , ಕೌಟುಂಬಿಕ ಚಿತ್ರ ಇಷ್ಟಪಡುವವರು ಈ ಸಿನಿಮಾಗೆ 100 ಮಾಕ್ಸ್ ಕೊಡೊದು ಗ್ಯಾರೆಂಟಿ .

ಇನ್ನೂ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು , ಭಾವನಾತ್ಮಕ ಸಂಬಂಧಗಳಲ್ಲಿ ಒಂದು ಸಣ್ಣ ಬಿರುಕು ಬಿಟ್ಡರು ಹೇಗೆ ಅದು ತಿರುವನ್ನ ಪಡೆದುಕೊಳ್ಳುತ್ತೆ ಅನ್ನೊದನ್ನ ನಿರ್ದೇಶಕರು ತುಂಬಾ ಚನ್ನಾಗಿ ಕತೆ ಕಟ್ಟಿಕೊಟ್ಟಿದ್ದಾರೆ . ಸೋಮು ಕೆಂಗೇರಿ ಅವರ ಮೊದಲ ಸಿನಿಮಾವಾದರೂ ಅದ್ಬುತವಾಗಿ ಮೂಡಿ ಬಂದಿದೆ . ಇನ್ನೂ ” ಮಗಳೇ ” ಪಾರ್ಟ್ 2 ಬರುವ ನಿರೀಕ್ಷೆ ಇದೆ . ಅದು ಕೂಡಾ ತುಂಬಾ ಕುತೂಹಲ ಮೂಡಿಸಿದೆ .